ಕಯಾಕೆಂಟ್ ಸಂಸ್ಕೃತಿ : ರಷ್ಯದ ಕಾಕೇಷಿಯ ಪ್ರಾಂತ್ಯದ ಈಶಾನ್ಯ ಭಾಗದಲ್ಲಿ ದಘೆಸ್ತಾನ್ ಜಿಲ್ಲೆಯ ಕರಾವಳಿಯಲ್ಲಿಯ ಕಯಾಕೆಂಟ್ ನೆಲೆಯಲ್ಲಿದ್ದ ಸಂಸ್ಕೃತಿ. ಇದನ್ನು ಎ. ಸಿ. ಕ್ರುಗ್ಲಾಫ್ 1939ರಲ್ಲಿ ಪರಿಶೋಧಿಸಿದ. ಇದು ಪ್ರ.ಶ.್ರಪು. 3ನೆಯ ಸಹಸ್ರಮಾನದ ಉತ್ತರಾರ್ಧಕ್ಕೆ ಸೇರಿದ್ದು ಇಲ್ಲಿಯ ವಸತಿಗಳು ಕೋಟೆಯಿಂದ ರಕ್ಷಿತವಾಗಿದ್ದುವು. ಮನೆಗಳನ್ನು ಕಲ್ಲು ಮತ್ತು ಮಣ್ಣಿನಿಂದ ಲೇಪಿತವಾಗಿದ್ದ ತಡಿಕೆಗಳಿಂದ ನಿರ್ಮಿಸುತ್ತಿದ್ದರು. ವ್ಯವಸಾಯ ಈ ಜನರ ಮುಖ್ಯ ವೃತ್ತಿ. ಪಶುಪಾಲನೆ, ಕುರಿಸಾಕಣೆ ಇತರ ಪ್ರಮುಖ ಉದ್ಯೋಗಗಳು. 

ಕಲ್ಲಿನಲ್ಲಿ ಮಾಡಿದ ಕೈಗಾಣಗಳೂ ಅರೆಯುವ ಕಲ್ಲುಗಳೂ ಚಕಮಕಿ ಕಲ್ಲಿನ ಹಲ್ಲುಗಳಿದ್ದ ಕುಡುಗೋಲುಗಳೂ ಇವರ ವ್ಯವಸಾಯದ ಉಪಕರಣಗಳಾಗಿದ್ದುವು. ಮಣ್ಗಾರೆಯಲ್ಲಿ ಮತ್ತು ಪಾತ್ರೆಗಳನ್ನು ಮಾಡುವ ಮಣ್ಣಿನಲ್ಲಿ ಹಲವಿಧ ಧಾನ್ಯಗಳು ಕಂಡು ಬಂದಿವೆ. 	*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ